ಈ ಮನಸು

ಈ  ಮನಸು █║▌│█│║▌║││█║▌║█║▌│█│║
ಈ ಮನಸು Verified Officia

ಕಡೆಗೆ ಜಯ ಸತ್ಯಕ್ಕೆ, ಜಯವೇನೊ ದಿಟವಂತೆ |ತಡವೇಕೊ! ಶೀಘ್ರದಿನೆ ಜಯಬಾರದೇಕೋ! ||ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |ನುಡುಗಿದ್ದ ಮುದುಕನಲಿ...
28/08/2026

ಕಡೆಗೆ ಜಯ ಸತ್ಯಕ್ಕೆ, ಜಯವೇನೊ ದಿಟವಂತೆ |
ತಡವೇಕೊ! ಶೀಘ್ರದಿನೆ ಜಯಬಾರದೇಕೋ! ||
ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |
ನುಡುಗಿದ್ದ ಮುದುಕನಲಿ ಮರುಳ ಮುನಿಯ || ೨೬೯

ಮುದುಕ = ಇಲ್ಲಿ ಮುಪ್ಪು.
ದಿಟ = ನಿಜ
ಪೊಡವಿ = ಭೂಮಿ, ಇಲ್ಲಿ ರಾಜ್ಯ.
ಐತರೆ= ಬರಲು.
ಉಡುಗು = ಕುಂದು, ದುರ್ಬಲನಾಗು.

ಸತ್ಯಕ್ಕೇ ಜಯವೆನ್ನುವುದು ನಿತ್ಯವಾದ ಮಾತು. ಆದರೆ ಯಾವಾಗ ಎಂಬುದು ಪ್ರಶ್ನೆ. ಬದುಕೆಲ್ಲ ಹೋರಾಡಿ ಪಡೆದ ಜಯವನ್ನು ಅನುಭವಿಸಲಾಗದೆ ಸತ್ತರೆ ಅದಕ್ಕೆ ಬೆಲೆಯುಂಟೇ.

ಸತ್ಯವೇ ಗೆಲ್ಲುವುದಾದರೆ, ಅದಕ್ಕೆ ತಡವೇಕೆ? ತಕ್ಷಣವೇ ಗೆಲ್ಲಬಾರದೇ. ಜನರು ಮೋಸಗಾರರಿಗೆ ಆಕರ್ಷಿತರಾಗುವಂತೆ ಸತ್ಯವಂತರೆಡೆಗೆ ಸೆಳೆಯಲ್ಪಡುವುದಿಲ್ಲ. ನಯವಂಚನೆಯ ಮಾತುಗಳು ಆಪ್ಯಾಯಮಾನವಾಗುತ್ತವೆ. ಸತ್ಯವು ಕಹಿ ಗುಳಿಗೆಯಿದ್ದಂತೆ.

ಹರಿಶ್ಚಂದ್ರನ ವಿಚಾರವನ್ನು ಪ್ರಸ್ತಾಪಿಸಿ ಅವನು ಪಟ್ಟ ಶ್ರಮದ ಉಲ್ಲೇಖ ಮಾಡಿ ಅದನ್ನು ವೈಭವೀಕರಿಸಿದರೂ, ಅವನು ಸತಿಸುತರನ್ನು ಮರಳಿ ಪಡೆದಾಗ ಮದುಕನಾಗಿ ದುರ್ಬಲನಾಗಿದ್ದ. ಆಗ ಅವನೆಂತಹ ದೈಹಿಕ ಸುಖ ಅನುಭವಿಸಿದ? ಎಂಬ ಪ್ರಶ್ನೆ ಎತ್ತಲಾಗಿದೆ.

ನಾವು ಗಮನಿಸಬೇಕಾದುದು. ನಮ್ಮ ಕರ್ತವ್ಯವನ್ನು ಹರಿಶ್ಚಂದ್ರನು ಹಾಗಿ ಕಷ್ಟದ ಹಾದಿಯಲ್ಲಿ ನಡೆದು ಬಂದ ಕಾರಣಕ್ಕಾಗಿಯೇ ಇಂದಿಗೂ ಜನಮಾನಸದಲ್ಲಿ ಉಳಿದನು.

ನಮ್ಮಕೆಲಸಗಳ ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಧರ್ಮದೀಪವಾಗಬೇಕೇ ಹೊರತು, ಅಧರ್ಮ ಕಾರಣವಾಗಬಾರದು.

ಅದಾವ ಜನ ತಮ್ಮ ಮಕ್ಕಳಿಗೆ ಮಂಥರೆಯೆಂದೋ, ನಕ್ಷತ್ರಿಕನೆಂದೋ ಹೆಸರಿಡುತ್ತಾರೆ. ನಡವಳಿಕೆ ನಮ್ಮ ಸಂಸ್ಕೃತಿಯ ಉಸಿರು. ಅದನ್ನು ಬಳಸೋಣ, ಬೆಳೆಸೋಣ.

ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವ ತನಕ |ವ್ಯಯವೆಷ್ಟು?  ಲೋಗರಾತ್ಮಕೆ ಗಾಯವೆಷ್ಟು? ||ಭಯಪಡಿಸೆ ದಯೆಬಿಡಿಸಿ ನಯಗೆಡಿಸಿ ಬಂದ ಜಯ |ಜಯವೊ? ಅಪಜಯಸಮವೊ...
26/08/2026

ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವ ತನಕ |
ವ್ಯಯವೆಷ್ಟು? ಲೋಗರಾತ್ಮಕೆ ಗಾಯವೆಷ್ಟು? ||
ಭಯಪಡಿಸೆ ದಯೆಬಿಡಿಸಿ ನಯಗೆಡಿಸಿ ಬಂದ ಜಯ |
ಜಯವೊ? ಅಪಜಯಸಮವೊ? ಮರುಳ ಮುನಿಯ || ೨೬೮

ಲೋಗರು = ಸಾಮಾನ್ಯ ಜನ.
ವ್ಯಯ= ಖರ್ಚು.

ಗೆಲ್ಲುವುದೊಂದೇ ಗುರಿಯಲ್ಲ. ಅದರ ಹಾದಿ ಕೂಡಾ ಸರಿಯಾಗಿರಬೇಕು. ಧರ್ಮಕ್ಕೆ ಜಯ ನಿಶ್ಚಿತವಾದರೂ ಹಾದಿಯು ಅಧರ್ಮವಾಗಬಾರದು. ಇನ್ನೊಬ್ಬರಿಗೆ ನೋವುಂಟು ಮಾಡಿ ಅಥವಾ ಕೇಡೆಣಿಸಿ ಪಡೆದ ಜಯವು ಜಯವೆನಿಸದು.

ಧರ್ಮಕ್ಕೆ ಜಯವಾಗಬೇಕು ನಿಜ. ಆದರೆ ಧರ್ಮವು ಜಯಿಸುವವರೆಗೂ ಆಗುವ ಸಂಪತ್ತಿನ ವ್ಯಯವು ಸಾಮಾನ್ಯವೇ. ಸಾಮಾನ್ಯ ಜನರ ಮನದ ನೋವು ಕಡಿಮೆಯೇ. ಅವರ ಅಂತರಂಗಕ್ಕಾದ ಗಾಯವನ್ನು ಗುಣಪಡಿಸುವುದೆಂತು.

ದಯವೇ ಧರ್ಮದ ಮೂಲವೆಂಬ ತತ್ತ್ವ ನಾಶವಾಗಿ ಭಯವೇ ಧರ್ಮದ ಮೂಲವಾಗಿ ವಿಜೃಂಭಿಸಿದಾಗ ಜನರ ಗತಿಯೇನು?

ನಯವಿಲ್ಲದ ಜಯವು ಜಯವೇ, ಅದು ಸೋಲಿಗೆ ಸಮವೆನಿಸೀತು. ಅವಮಾನದ ಗೆಲುವಾದೀತು, ಮೋಸದ ಜಯವಾದೀತು.

ಈ ಜಗತ್ತಿನಲ್ಲಿ ಹೆಚ್ಚು ಸಾಹಿತ್ಯವು ಸೃಷ್ಟಿಯಾಗಿರುವುದು ಯುದ್ಧದ ಬಗ್ಗೆ ಅನಂತರ ಪ್ರೀತಿ ಕರುಣೆ ಇತ್ಯಾದಿ.

ಎಲ್ಲರೂ ಗೆದ್ದೆತ್ತಿನ ಬಾಲಹಿಡಿವ ಬಾಲಬಡುಕರೇ. ಹಾಗೆ ನೋಡಿದರೆ ಯಾವ ಯುದ್ಧವೂ ನೆಮ್ಮದಿ ನೀಡಿಲ್ಲ. ಆದರೆ ಎಲ್ಲ ಸಮರದ ಕೊನೆಗೂ ನೋವುಳ್ಳ ಶಾಂತಿಯೇ ದಕ್ಕಿದೆ.

ಆದ್ದರಿಂದ ಹೇಗೋ ಪಡೆದ ಜಯವು ಅಪಜಯಕ್ಕೆ ಸಮ. ಮೊದಲು ಜನಮಾನಸವನ್ನು ಗೆದ್ದರೆ ವಿಶ್ವವನ್ನೇ ಗೆದ್ದಂತೆ.

ವಾಮ ಮಾರ್ಗದ ಗೆಲುವೆಂದಿಗೂ ಗೆಲುವಲ್ಲ.

ನ್ಯಾಯಕೇ ಜಯವಂತೆ ಧರ್ಮಜನೆ ಸಾಕ್ಷಿಯಲ |ದಾಯಿಗರ ಸದೆದು ದೊರೆತನವ ಗೆದ್ದನಲ ||ಆಯಸಂಬಟ್ಟುಂಡುದೇನೆನ್ನದಿರ್ ಪೈತ್ರ |ವಾಯಸಗಳುಂಡವಲ ಮರುಳ ಮುನಿಯ ||...
25/08/2026

ನ್ಯಾಯಕೇ ಜಯವಂತೆ ಧರ್ಮಜನೆ ಸಾಕ್ಷಿಯಲ |
ದಾಯಿಗರ ಸದೆದು ದೊರೆತನವ ಗೆದ್ದನಲ ||
ಆಯಸಂಬಟ್ಟುಂಡುದೇನೆನ್ನದಿರ್ ಪೈತ್ರ |
ವಾಯಸಗಳುಂಡವಲ ಮರುಳ ಮುನಿಯ || ೨೬೭

ಪೈತ್ರ = ಪಿತೃ ದೇವತೆಗಳಿಗೆ ಸಂಬಂಧಿಸಿದ, ಇಲ್ಲಿ ಪಿತೃಗಳಿಗೆ ಬಡಿಸಿದ ಕೂಳು.
ವಾಯಸ = ಕಾಗೆ.
ದಾಯಿಗ= ದಾಯಾದಿ.
ಸದೆದು = ನಾಶಮಾಡಿ.

ಗೆಲುವು ಹೇಗಿರಬೇಕು? ಅದರಿಂದಾಗುವ ಲಾಭವೇನು? ಗೆಲುವಿನಿಂದ ಯಾವುದೇ ಉಪಯೋಗವಿಲ್ಲದಿದ್ದರೆ ಆ ಗೆಲುವು ನಿಜದ ಗೆಲುವಾಗುವುದೇ ಇಲ್ಲ. ಅದು ಸಾಮಾನ್ಯನಿಗಾದರೂ ಅಷ್ಟೆ, ಧರ್ಮರಾಯನಿಗಾದರೂ ಅಷ್ಟೆ.

ಕುರುಕ್ಷೇತ್ರದ ತರುವಾಯ ಗೆದ್ದದ್ದು ಧರ್ಮರಾಯನೇ ಆದರೂ, ಯಾರ ವಿರುದ್ಧ ಗೆದ್ದ ಎಂದರೆ ಅವನ ಅಣ್ಣತಮ್ಮಂದಿರ ವಿರುದ್ಧವೇ. ದಾಯಾದಿಗಳ ಕೊಂದ ಯುದ್ಧಕ್ಕೆ ಧರ್ಮಜನೇ ಸಾಕ್ಷಿಯಾದುದು ಎಂತಹ ವಿಪರ್ಯಾಸ.

ಬಂಧುಗಳೂ, ಹಿರಿಯರೂ, ಶ್ರೇಷ್ಠ ರ ಜೊತೆಗೆ ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಪಣಕ್ಕಿಟ್ಟು ಆಡಿದ ಯುದ್ದದಲ್ಲಿ ಸುಮ್ಮನೇ ಗೆದ್ದನೇನು ಯುಧಿಷ್ಟಿರ.

ಅವನ ಜಯದಲ್ಲಿ ನೋವಿತ್ತು. ಗೆಲುವಲ್ಲಿ ಸಾವಿತ್ತು. ನೆಮ್ಮದಿಯಿಂದ ಆಳಲಾಗಲಿಲ್ಲ. ಯಾವುದೇ ಯುದ್ಧವೂ ಧರ್ಮವನ್ನು ಪೂರ್ಣ ಪಾಲಿಸುವುದಿಲ್ಲ. ಪಾಪಿಗಳ ಜೊತೆಗೆ ಪುಣ್ಯವಂತರೂ, ಧರ್ಮಿಷ್ಟರೂ ಪ್ರಾಣತ್ಯಾಗ ಮಾಡುತ್ತಾರೆ.

ಗೆದ್ದವರ ಪಾಲಿಗುಳಿಯುವುದು ಒಂದಿಷ್ಟು ಆಯಾಸ ಮತ್ತು ಮನದೊಳಗಣ ಹೇಳಲಾಗದ ದುಃಖ ಮಾತ್ರ.

ಸತ್ತವರಿಗಿಟ್ಟ ಕೂಳನುಂಡ ವಾಯಸಗಳನ್ನು ಕಾಣುವ ದೃಶ್ಯವಷ್ಟೇ ಲಾಭ‌.

ಆದ್ದರಿಂದ ಅಲಿಪ್ತವಾದ ನೀತಿ ಉತ್ತಮವಾದುದು ಎಂಬುದು ಅಭಿಮತ.

ಹುಣ್ಣನ್ನು ಕತ್ತರಿಸುವುದು ತಪ್ಪಲ್ಲ. ಯುದ್ಧವೂ ತಪ್ಪಲ್ಲ, ಗೆದ್ದೆನೆಂಬ ಭಾವ ಮಾತ್ರ ತಪ್ಪು.

ಜಯವಲ್ಲಿ‌ ಧರ್ಮಕಮಧರ್ಮಕಂ ಜಯವೆಲ್ಲಿ? |ಜಯವೇನಜಯವೇನನಂತಕೇಳಿಯಲಿ? ||ಜಯದ ಹಾದಿಗಳೆಲ್ಲ  ಧರ್ಮದೀಪ್ತಗಳಲ್ಲ |ಸ್ವಯಮಲಿಪ್ತನಿಗೆ ಜಯ ಮರುಳ ಮುನಿಯ ||...
25/08/2026

ಜಯವಲ್ಲಿ‌ ಧರ್ಮಕಮಧರ್ಮಕಂ ಜಯವೆಲ್ಲಿ? |
ಜಯವೇನಜಯವೇನನಂತಕೇಳಿಯಲಿ? ||
ಜಯದ ಹಾದಿಗಳೆಲ್ಲ ಧರ್ಮದೀಪ್ತಗಳಲ್ಲ |
ಸ್ವಯಮಲಿಪ್ತನಿಗೆ ಜಯ ಮರುಳ ಮುನಿಯ || ೨೬೬

ಅಲಿಪ್ತ = ವಿರಕ್ತ, ಅಸೂಯೆಯಿಲ್ಲದವ.
ಅನಂತ ಕೇಳಿ = ಕೊನೆಯಿಲ್ಲದ, ಕೊನೆಯಾಗದ ಆಟ.

ಯಾರಿಗೆ ಜಯ ದಕ್ಕಿದೆ. ಒಮ್ಮೆ ಧರ್ಮಕೆ, ಮತ್ತೊಮ್ಮೆ ಅಧರ್ಮಕೆ. ಆದರೆ ಯಾವುದೂ ಶಾಶ್ವತವಾಗಿ ನಿಂತಿಲ್ಲ. ಯಾರು ದ್ವಂದ್ವ ಭಾವಗಳಿಲ್ಲದೇ ನಿರ್ಲಿಪ್ತರಾಗಿರುವರೋ ಅವರಿಗೆ ಮಾತ್ರ ಜಯ ದಕ್ಕುತ್ತದೆ. ಅದೂ ಶ್ರೀ ರಾಮನಂತಹ, ಶ್ರೀ ಕೃಷ್ಣನಂತಹ ಯೋಗಪುರುಷರಿಗೆ ಮಾತ್ರ ಸಾಧ್ಯ.

ಪ್ರತಿಯುಗದಲ್ಲಿಯೂ ಮಾನವನ ಜೀವನದಲ್ಲಿ ಹೊಯ್ದಾಟ ಆರಂಭವಾಗುವುದು ಗೆಲುವಿನ ಹಿಂದೆ ಬಿದ್ದಾಗಲೇ ಎಂಬುದು ಸಾಬೀತಾಗಿದೆ.

ಜಯದ ಹಾದಿಯು ಯಾವಾಗಲೂ ಧರ್ಮದ ಬೆಳಕಿನಲ್ಲಿ ಸಾಗುವುದೇ ಇಲ್ಲ. ಮಹಾಪುರುಷರು ಧರ್ಮದೀಪಕರೇ ಆಗಿದ್ದರೂ ತಂತ್ರಗಾರಿಕೆಯೂ ಮುಖ್ಯವಾಗಿಬಿಡುತ್ತದೆ. ಇಷ್ಟರ ನಡುವೆ ನಮ್ಮ ಮನದಲ್ಲಿ ಸದಾ ಉಳಿಯುವವರು ಅಧಿಕಾರಕ್ಕೆ ಹಪಹಪಿಸದ ನಿರ್ಮಲ ಮನದವರೇ ಆಗಿದ್ದಾರೆ.

ಅಧಿಕಾರಕ್ಕಾಗಿ, ಜಯಕ್ಕಾಗಿ ಮಾಡುವ ಹೋರಾಟಕ್ಕೆ ಕೊನೆಯೆಲ್ಲಿದೆ. ಅದು ಅನಂತ, ನಿಲ್ಲುವುದೂ ಇಲ್ಲ , ಕೊನೆಯಾಗುವುದೂ ಇಲ್ಲ.

ನಾವಂದುಕೊಂಡ ಯಾವುದೇ ಜಯವು ಧರ್ಮಜಯವಲ್ಲವೆಂಬುದನ್ನು ಅರಿಯಬೇಕಾಗಿದೆ. ಏಕೆಂದರೆ ಇವೆಲ್ಲವೂ ಬಾಹ್ಯಕ್ಕೆ ಸಂಬಂಧಿಸಿದ್ದು. ಅಂತರಂಗಕ್ಕಲ್ಲ. ಇತಿಹಾಸದ ಜಯಗಳೂ ಕೂಡಾ ಇದರಿಂದ ಹೊರತಾಗಿಲ್ಲ.

ಧರ್ಮದ ಜಯವು ಮೊದಲು ಅಂತರಂಗವನ್ನೂ ತರುವಾಯ ಬಹಿರಂಗವನ್ನೂ ಉದ್ಧರಿಸುತ್ತದೆ. ಅಲ್ಲಿಯವರೆಗೂ ಮನ್ನಣೆಯ ದಾಹದಿಂದ ದೂರವಿರಬೇಕು.

ಗಿರಿ ಶಿಖರದಲಿ ತತ್ತ್ವ ಧರೆಯ ಹಳ್ಳದಿ ನೀನು |ಗರುಡರೆಕ್ಕೆಯನು ನೀಂ ಪಡೆಯದಿರ್ದೊಡೆಯುಂ ||ಸ್ಫುರಿಸಲಿನಿತಾಗಾಗ ಶಿಖರ ನಿನ್ನಯ ಕಣ್ಗೆ |ಪುರುಳಹುದೊ ...
23/08/2026

ಗಿರಿ ಶಿಖರದಲಿ ತತ್ತ್ವ ಧರೆಯ ಹಳ್ಳದಿ ನೀನು |
ಗರುಡರೆಕ್ಕೆಯನು ನೀಂ ಪಡೆಯದಿರ್ದೊಡೆಯುಂ ||
ಸ್ಫುರಿಸಲಿನಿತಾಗಾಗ ಶಿಖರ ನಿನ್ನಯ ಕಣ್ಗೆ |
ಪುರುಳಹುದೊ ಕಾಲಿಗದು ಮರುಳ ಮುನಿಯ || ೨೬೫

ಸ್ಫುರಿಸಲಿ= ಹುಟ್ಟಲಿ, ಎದ್ದುಕಾಣಲಿ.
ಪುರುಳು = ಸತ್ತ್ವ, ಶಕ್ತಿ.

ನಾವು ಮಾಡುವ ಕೆಲಸಕ್ಕೆ ಸ್ಫೂರ್ತಿ ಬೇಕು. ಹುಮ್ಮಸ್ಸಿಲ್ಲದ ಯಾವ ಕೆಲಸವೂ ದಡ ಮುಟ್ಟಲಾರದು. ನೀರಸವಾಗಿ ಮಾಡಿದ ಕಾರ್ಯವು ಯಾಂತ್ರಿಕವಾಗಿದ್ದು ಅದರಲ್ಲಿ ಯಾವ ಸುಖವೂ ಇರದು.

ಪರಬ್ರಹ್ಮ ಅಥವಾ ಬ್ರಹ್ಮ ತತ್ತ್ವವು ಬಹಳ ಎತ್ತರದಲ್ಲಿರುತ್ತದೆ. ಅಂದರೆ ಪರ್ವತದ ಶಿಖರದಲ್ಲಿದೆ. ನಾವು ಎಂದಿನಂತೆ ನೆಲದ ನಿವಾಸಿಗಳು. ಪರ್ವತದ ಎತ್ತರಕ್ಕೆ ಹೋಲಿಸಿದರೆ ನಮ್ಮ ಕಾಲಿರುವುದು ಹಳ್ಳದಲ್ಲಿಯೇ.

ನಮಗೆ ಗರುಡರೆಕ್ಕೆಯಿಲ್ಲ. ಗರುತ್ಮಂತನಂತೆ ಹಾರಿ ಶಿಖರದ ತುದಿಯನ್ನು ತಲುಪಲಾರೆವು. ಆದರೆ ನಮ್ಮ ದೃಷ್ಟಿಗೆ ಶಿಖರದ ತುದಿಯು ಆಗಾಗ ಕಾಣುತ್ತಿದ್ದರೆ ಅದನ್ನು ತಲುಪಲು ಹೊರಟ ನಮ್ಮ ಕಾಲಿಗೊಂದಿಷ್ಟು ಶಕ್ತಿ ಬಂದೀತು.

ಪ್ರತಿಯೊಬ್ಬ ಮನುಜನಿಗೂ ತಾನು ತಲುಪಬೇಕಾದ ಗಮ್ಯ ಕಾಣಿಸುತ್ತಿದ್ದರೆ ಮಾತ್ರ ಅದರೆಡೆಗಿನ ನಡೆ ವೇಗವಾದೀತು. ಸಾಧಿಸಬೇಕೆಂಬ ನಿರ್ಧಾರ ಬಲವಾದೀತು.

ಕೆಳಗೆ ಬಿದ್ದ ಜೇಡರ ಹುಳು, ರಾಜಾ ಬ್ರೂಸ್, ಎಲ್ಲರಿಗಿಂತ ಹೆಚ್ಚಾಗಿ ವಿಶ್ವಾಮಿತ್ರರು ನಮಗೆ ಈ ವಿಚಾರದಲ್ಲಿ ಮಾದರಿಯಾಗಿದ್ದಾರೆ.

ಆದ್ದರಿಂದಲೇ ಬದುಕಿನಲ್ಲಿ ಉತ್ಸಾಹದಿಂದ ಮುನ್ನಡೆಯಬೇಕು. ಆಗಲೇ ಧನ್ಯತೆ ನಮ್ಮದಾಗುತ್ತದೆ.

ಬಾಹ್ಯದಿಂದಂತರಮಂತರದೆ ಬಾಹ್ಯಕಂ |ಗ್ರಾಹ್ಯಮಾಗಿಹುದೊಂದಖಂಡೈಕ ರಸವು ||ಗುಹ್ಯವದು ನಿತ್ಯಾನುಸಂಧಾನದಿಂದಲವ- |ಗಾಹ್ಯವಾ ರಸತತ್ತ್ವ ಮರುಳ ಮುನಿಯ || ...
23/08/2026

ಬಾಹ್ಯದಿಂದಂತರಮಂತರದೆ ಬಾಹ್ಯಕಂ |
ಗ್ರಾಹ್ಯಮಾಗಿಹುದೊಂದಖಂಡೈಕ ರಸವು ||
ಗುಹ್ಯವದು ನಿತ್ಯಾನುಸಂಧಾನದಿಂದಲವ- |
ಗಾಹ್ಯವಾ ರಸತತ್ತ್ವ ಮರುಳ ಮುನಿಯ || ೨೬೪

ಗುಹ್ಯ = ಗುಪ್ತ.
ಲವಗಾಹ್ಯ = ಸ್ವಲ್ಪ ತಿಳಿಯಬಹುದಾದ.
ಬಾಹ್ಯ = ಹೊರಗಿನದು, ಬಹುತೇಕ ಇಂದ್ರಿಯಾನುಭವ.
ಅಂತರ= ಆಂತರಂಗಿಕ, ಮನಸ್ಸು.
ಗ್ರಾಹ್ಯ = ಸಿಗುವ, ಹಿಡಿದಿಡಬಹುದಾದ.
ಅವಗಾಹ್ಯ= ಮನದೊಳಗೆ ಲೀನವಾಗುವ. ಆದರೆ ಹಿಡಿಯಲಾಗದ.

ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ.... ಎಂಬ ಗೋಪಾಲಕೃಷ್ಣ ಅಡಿಗರ ಕವಿವಾಣಿ ಕಿವಿಯಲ್ಲಿ ಗುನುಗುಡುತ್ತಿದೆ. ಬಾಹ್ಯದಿಂದ ಅಂತರಂಗಕೆ ಅಂತರಂಗದಿಂದ ಬಾಹ್ಯಕೆ ಅಖಂಡೈಕ ರಸವು ಹರಿಯುತ್ತಿದೆ. ಇದೇ ಬ್ರಹ್ಮಾನುಭವ.

ಹೀಗೆ ಅಂತರಂಗ ಬಹಿರಂಗಗಳ ನಡುವೆ ಹರಿವ ಸುಧಾರಸವು ರಸಾನುಭವದ ಸುಖವನ್ನು ನೀಡುತ್ತದೆ. ಇದು ಮಾನವರಿಗೆ ಆನಂದರಸದ ಅನುಸಂಧಾನವನ್ನೂ ಉಂಟುಮಾಡುತ್ತದೆ. ಇದೇ ರಸತತ್ತ್ವ.

ಹಾಗಾದರೆ ಇದು ಹೇಗೆ ಉಂಟಾಗುತ್ತದೆ, ಸಾಮಾನ್ಯರು ಇದನ್ನು ಪಡೆಯಲಾಗದೇ, ಇದೇ ಆತ್ಮಾನುಭವವೇ. ಯಾರಿಗೆ ಅಂತರಂಗ ಬಹಿರಂಗಗಳಲ್ಲಿ ಎಲ್ಲರೂ ಸಮಾನರೆಂಬ ಭಾವ ಮೂಡುವುದೋ ಜಗವೆಲ್ಲ ನನ್ನದೆಂಬ ವಿಶಾಲವಾದ ಅನುಭವವಾಗುವುದೋ ಅವರಿಗೆ ಜಗವೆಲ್ಲವೂ ಒಂದೆಂಬ ಭಾವ ಆವರಿಸುವುದು.

ಎಲ್ಲವೂ ಬ್ರಹ್ಮನೇ ಆಗಿಬಿಡುವುದು. ಡಿವಿಜಿ ಕಗ್ಗದಲ್ಲಿಯೂ, ಇತರ ಕೃತಿಗಳಲ್ಲಿಯೂ ಇದನ್ನೇ ಸಾರಿ ಹೇಳಿದ್ದಾರೆ. ಅವರು ಬ್ರಹ್ಮಪುರಿಯ ಭಿಕ್ಷುಕನೂ ಹೌದು, ಬ್ರಹ್ಮಾನುಭವಿಯೂ ಹೌದು.

ಆದ್ದರಿಂದಲೇ ಅವರ ಕಗ್ಗಗಳು ಜೀವನದ ಸಾರವನ್ನು ಎರಕ ಹೊಯ್ದಂತೆ ಜೀವಂತಸಾಕ್ಷಿಯಾಗಿವೆ.

ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ |ತಿರುತಿರುಗಿ ಬಳಬಳಲಿ ಪಾಳಾಗದಿರೆ ಬಾಳ್ ||ಸ್ಥಿರಸತ್ಯವಿರಬೇಕು ಬಾಳ್ ಪ್ರದಕ್ಷಿಣವದಕೆ |ಅರಸು ನೀನದನುರದಿ...
21/08/2026

ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ |
ತಿರುತಿರುಗಿ ಬಳಬಳಲಿ ಪಾಳಾಗದಿರೆ ಬಾಳ್ ||
ಸ್ಥಿರಸತ್ಯವಿರಬೇಕು ಬಾಳ್ ಪ್ರದಕ್ಷಿಣವದಕೆ |
ಅರಸು ನೀನದನುರದಿ ಮರುಳ ಮುನಿಯ || ೨೬೩

ಉರ = ಹೃದಯ, ಎದೆ.
ಪಥ = ದಾರಿ.
ಬಳಲು = ಆಯಾಸಗೊಳ್ಳು.
ಅರಸು = ಹುಡುಕು.

ಬಾಳೆಗೊಂದು ಗೊನೆಯಂತೆ ಬಾಳಿಗೊಂದು ಗುರಿಯಿರಬೇಕು. ಗುರಿಯಿರದ ಬಾಳು ದಿಕ್ಸೂಚಿಯಿಲ್ಲದೇ ಸಾಗರದಿ ದೋಣಿಯಲ್ಲಿ ಪಯಣಿಸುವ ನಾವಿಕನಂತೆ, ಹಾಯಿ ಬಿಚ್ಚಿದ ಹಡಗಿನಂತೆ. ಎಲ್ಲಿಗೆ ಬೇಕಾದರೂ ತಲುಪಬಹುದು. ನಮಗೆ ಬೇಕಾದ ಕಡೆ ಅಥವಾ ಬೇಡವಾದ ಕಡೆ. ಆದ್ದರಿಂದ ನಮ್ಮ ಗುರಿ ನಮ್ಮದೇ ಆಗಬೇಕು. ಗುರಿಯಿದ್ದಾಗ ಸಾಧನೆಯ ಮಾರ್ಗ ತಂತಾನೆ ತೆರೆದು ಕೊಳ್ಳುತ್ತದೆ.

ಮಕ್ಕಳಿಗೆ ಶಾಲೆಯಲ್ಲಿ ಗುರುಗಳು ಮುಂದೆ ನೀನೇನಾಗುತ್ತೀಯೆ ಎಂಬ ಪ್ರಶ್ನೆ ಕೇಳುವುದು ಅವರ ಕುತೂಹಲಕ್ಕಲ್ಲ. ಬದಲಿಗೆ ಮಕ್ಕಳ ಗುರಿ ಏನೆಂಬುದನ್ನು ಅವರಿಗೆ ತಿಳಿ ಹೇಳುವ ಪ್ರಯತ್ನವಾಗಿರುತ್ತದೆ.

ಹಾಗಾಗಿ ಗುರಿಯಿದ್ದರೆ ಹಾದಿ ಸುಲಭ, ಸುಗಮವೂ ಆದೀತು. ಗುರಿಯಿಲ್ಲದವನ ಬಾಳು "ಎರಡು ಕೊಟಾರದ ದಾಸಯ್ಯನಂತಾದೀತು".

ಎಲ್ಲಿಗೆ ಹೋಗ ಬೇಕು ಎಂದು ಕೇಳಿದವರಿಗೆ ನಮ್ಮ ಗಮ್ಯವನ್ನು ಹೇಳಲಾಗದಿದ್ದರೆ, ಗಮ್ಯವೇ ಇಲ್ಲದಿದ್ದರೆ, ನಮ್ಮ ತಿರುಗಾಟ ವ್ಯರ್ಥವೇ ಸರಿ.

ಸ್ಥಿರಸತ್ಯವೇ ಭಗವಂತ. ನಮ್ಮ ಬಾಳು ಆ ದಿಟಕ್ಕೆ ಮಾಡುವ ಪ್ರದಕ್ಷಿಣೆ. ಹಾಗೆ ಸುತ್ತುತ್ತಾ ಕಡೆಗೆ ಸತ್ಯದರ್ಶನವಾಗುವುದು ನಮ್ಮೊಳಗೇ. ಅಂತರಂಗದ ಕದವ ತೆರೆಯದೇ ಅಚ್ಯುತನ ಕಾಣಲಾಗದು.

ಗೊಂಡಾರಣ್ಯವು ಹೇಗೆ ಭೇದಿಸಲು ಅಸಾಧ್ಯವೋ, ಹಾಗೆ ಲೋಕಾರಣ್ಯವೂ (ಜಗದಡವಿ) ಅನೇಕ ಜನರಿಂದಲೂ ಪ್ರಕೃತಿಯಿಂದಲೂ, ಆಸೆ ಆಕಾಂಕ್ಷೆಗಳಿಂದಲೂ ನಿಬಿಡವಾಗಿ ನಾವು ಹಾದಿ ತಪ್ಪುವಂತೆ ಮಾಡುತ್ತದೆ.

ಭಗವಂತನೇ ದಿಕ್ಕಾದಾಗ ಸತ್ಯವು ಮಾರ್ಗವಾಗಿ ಪರಮಾರ್ಥ ತಂತಾನೇ ಲಭ್ಯವಾಗುತ್ತದೆ.

ಇಂದ್ರಿಯ ಸಮಸ್ತದಖಿಲಾನುಭವಗಳ ನೀನು |ಕೇಂದ್ರೀಕೃತಂಗೆಯ್ದು ಮನನದಿಂ ಮಥಿಸಿ ||ತಂದ್ರಿಯಿರದಾತ್ಮ ಚಿಚ್ಛಕ್ತಿಯಿಂದುಜ್ಜುಗಿಸೆ |ಸಾಂದ್ರ ತತ್ತ್ವಪ್ರಾ...
21/08/2026

ಇಂದ್ರಿಯ ಸಮಸ್ತದಖಿಲಾನುಭವಗಳ ನೀನು |
ಕೇಂದ್ರೀಕೃತಂಗೆಯ್ದು ಮನನದಿಂ ಮಥಿಸಿ ||
ತಂದ್ರಿಯಿರದಾತ್ಮ ಚಿಚ್ಛಕ್ತಿಯಿಂದುಜ್ಜುಗಿಸೆ |
ಸಾಂದ್ರ ತತ್ತ್ವಪ್ರಾಪ್ತಿ ಮರುಳ ಮುನಿಯ || ೨೬೨

ಸಾಂದ್ರ= ಗಾಢ.
ತಂದ್ರಿ = ಆಲಸ್ಯ.
ಚಿಚ್ಛಕ್ತಿ = ಚಿತ್ + ಶಕ್ತಿ. ಮನಸ್ಸಿನ ಶಕ್ತಿ. ಇಲ್ಲಿ ಜ್ಞಾನದ ಶಕ್ತಿ.
ಉಜ್ಜುಗಿಸು= ನಡೆಸು.
ಸಾಂದ್ರತತ್ತ್ವ= ಪಾರಮಾರ್ಥಿಕ.

ಜಗವೆಲ್ಲವೂ ಭಗವಂತನ ಕಾಣಬಹುದಾದ ರೂಪವಾಗಿದೆ. ಇಂದ್ರಿಯಾನುಭವಗಳು ಮಾನವನ ಜ್ಞಾನವನ್ನು ಹೆಚ್ಚಿಸುತ್ತವೆಯೇ ಹೊರತು ಕುಗ್ಗಿಸುವುದಿಲ್ಲ. ಪ್ರತೀ ಅನುಭವವೂ ಮನನವೇ ಆಗುವುದರಿಂದ, ಇಂದ್ರಿಯಾನುಭವಗಳೂ ಪಾರಮಾರ್ಥಿಕದ ಹಾದಿಯ ಸೋಪಾನಗಳೇ ಆಗುತ್ತವೆ.

ಮನುಷ್ಯನು ತನಗೆ ಆಗುವ ಎಲ್ಲ ಬಗೆಯ ಇಂದ್ರಿಯಾನುಭವಗಳನ್ನೂ ಅದರಿಂದ ಉಂಟಾಗುವ ಅನುಭವದ ಸಾರವನ್ನೂ ನಿಯತವಾಗಿ ಕೇಂದ್ರೀಕರಿಸಿಕೊಂಡು ಅದನ್ನು ಮನಸಾ ಗಮನಿಸಿ ಆಲಸ್ಯ ರಹಿತನಾಗಿ ತನ್ನ ಮನೋಶಕ್ತಿಯಿಂದ ಅಥವಾ ತನಗುಂಟಾದ ಅರಿವಿನ ಫಲದಿಂದ ನಿತ್ಯಕಾರ್ಯಗಳಲ್ಲಿ ತೊಡಗಿಕೊಂಡರೆ ಪರಮಾರ್ಥ ಪ್ರಾಪ್ತಿಯಾಗದೇ ಇರದು.

ಆದರೆ, ಮಾನವನ ಕೆಲಸವೇ ಇರುವುದೆಲ್ಲವ ಬಿಟ್ಟು ಇರದುದರ ಎಡೆಗೆ ಚಿಂತಿಸುವುದೇ ಆಗಿದೆ.

ಏಕಾಗ್ರತೆ ಸಾಧಿಸಲಾಗದ ಮನುಷ್ಯ ಏನನ್ನೂ ಸಾಧಿಸಲಾರ.

ಮೊದಲಿಗೆ, ಸೋಮಾರಿತನವನ್ನು ಬಿಟ್ಟು ತನಗೆಟುಕುವ ಕಾರ್ಯಗಳ ಮೂಲಕವೇ ಘನತತ್ತ್ವವನ್ನು ಅರಿತು ಬಾಳಿದರೆ ಅದುವೇ ಸಾರ್ಥಕ ಜೀವನವಾಗುತ್ತದೆ.

ಕೂಡುವುದು ಚೆದುರುವುದು ಮತ್ತೊಟ್ಟು ಕೂಡುವುದು |ಓಡಾಡಿ ಗುಡುಗಿ ಮಿಂಚೆಸೆದು ಕರಗುವುದು ||ಕಾಡಿ ಭೂಮಿಯನುಬ್ಬೆಗಂಬಡಿಸಿ ಕಡೆಗೆಂದೊ |ಮೋಡ ಮಳೆಗರೆಯು...
20/08/2026

ಕೂಡುವುದು ಚೆದುರುವುದು ಮತ್ತೊಟ್ಟು ಕೂಡುವುದು |
ಓಡಾಡಿ ಗುಡುಗಿ ಮಿಂಚೆಸೆದು ಕರಗುವುದು ||
ಕಾಡಿ ಭೂಮಿಯನುಬ್ಬೆಗಂಬಡಿಸಿ ಕಡೆಗೆಂದೊ |
ಮೋಡ ಮಳೆಗರೆಯುವುದು ಮರುಳ ಮುನಿಯ || ೨೬೧

ಉಬ್ಬೆಗ = ಸಂತಾಪ, ಬೇಗುದಿ.
ಕಾಡು= ಪೀಡಿಸು.

ಮೋಡವನ್ನು ಪ್ರತಿಮೆಯನ್ನಾಗಿಸಿ ಅದರ ಚಲನವಲನಗಳನ್ನು ಮನುಷ್ಯನ ಜೀವನಕ್ಕೆ ಹೋಲಿಸಿ, ಸಿನಿಮಾದ ಕೊನೆಯಲ್ಲಿ ಶುಭಂ ತೋರಿಸುವ ರೀತಿಯಲ್ಲಿ ಒಳಿತನ್ನೇ ಮಾಡುತ್ತದೆ ಎಂಬ ನಂಬಿಕೆಯ ಅಡಿಯಲ್ಲಿ ಬದುಕು ಸಾಗಿಸುವಂತೆ ಕಗ್ಗವು ಬೋಧಿಸುತ್ತದೆ.

ಮೋಡಗಳೇ ಹಾಗೆ, ಆಗಸದಲ್ಲಿ ಚಿತ್ತಾರ ಮೂಡಿಸಿ ಮಾನವನೆದೆಯ ಚಂಚಲತೆಯನ್ನು ಪ್ರತಿನಿಧಿಸುತ್ತವೆ.

ಮೋಡಗಳು ಚದುರುವುದು, ಮತ್ತೆ ಸೇರುವುದು, ಅತ್ತಿತ್ತ ಚಲಿಸಿ ಕಡೆಗೊಮ್ಮೆ ಢೀಕೊಟ್ಟು ಗುಡುಗು ಮಿಂಚುಗಳೊಂದಿಗೆ ಆರ್ಭಟಿಸಿ ಕಾಡಿ ಕೊನೆಯವರೆಗೂ ಬೇಗುದಿಯನ್ನು ಉಳಿಸಿ ಮುಂದೊಂದು ದಿನ ಇಳೆಗೆ ಮಳೆಯನ್ನು ಸುರಿಸುತ್ತದೆ.

ಮಾನವರನ್ನು ಕುರಿತ ದೈವದ ಲೀಲೆಯೂ ಹೀಗೆಯೇ. ಇನ್ನಿಲ್ಲದಂತೆ ಕಾಡಿ, ಕಷ್ಟ ಕೋಟಲೆಗಳನ್ನು ನೀಡಿ, ಹೆಜ್ಜೆ ಹೆಜ್ಜೆಗೂ ಕಠಿಣ ಪರೀಕ್ಷೆಗಳನ್ನು ಒಡ್ಡಿ, ಉದ್ವೇಗದ ಮಡಿಲಲ್ಲಿ ಉರುಳಾಡಿಸಿ, ಕಡೆಗೆ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ ನಿರೀಕ್ಷೆಗೂ ಮೀರಿದ ಕೃಪಾಕಟಾಕ್ಷವನ್ನು ತೋರಿ ಸಮಾಧಾನದ ಮಳೆಗರೆಯುತ್ತದೆ.

ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ ಎಂಬ ಅಲ್ಲಮನ ಮಾತಿನಂತೆ ನಮ್ಮ ಬದುಕೂ ಕೂಡಾ ನೋವಿನಂಗಳದ ನಲಿವಿನ ಹೂವಿನಂತೆ ಭಾಸವಾಗುತ್ತದೆ.

ನೆಲನ ಬಿಡದಡಿ ರೆಕ್ಕೆ ತೊಡದ ಮೈಯಾದೊಡಂ |ಕೆಳಕೆ ಮೇಲಕೆ ನರನು ಮೊಗವ ತಿರುಗಿಸನೇಂ? ||ತಲೆಯ ತಾನೆತ್ತಿ ಗಗನಕೆ ಕಣ್ಣ ಸಾರ್ಚಿದಾ |ಗಳಿಗೆಯೇ ವಿಷ್ಣುಪ...
19/08/2026

ನೆಲನ ಬಿಡದಡಿ ರೆಕ್ಕೆ ತೊಡದ ಮೈಯಾದೊಡಂ |
ಕೆಳಕೆ ಮೇಲಕೆ ನರನು ಮೊಗವ ತಿರುಗಿಸನೇಂ? ||
ತಲೆಯ ತಾನೆತ್ತಿ ಗಗನಕೆ ಕಣ್ಣ ಸಾರ್ಚಿದಾ |
ಗಳಿಗೆಯೇ ವಿಷ್ಣುಪದ ಮರುಳ ಮುನಿಯ || ೨೬೦

ವಿಷ್ಣುಪದ = ಕೈವಲ್ಯ, ಮೋಕ್ಷ.
ಸಾರ್ಚು = ನೀಡು, ಕೊಡು, ಹಾಯಿಸು.
ಅಡಿ = ಪಾದ.

ಮಾನವನ ಸ್ವಭಾವವೆಂದರೆ ತಾನು ಎಲ್ಲಿದ್ದರೂ, ಹೇಗಿದ್ದರೂ ತನಗಿಂತ ಹೆಚ್ಚಿನದನ್ನು ಬಯಸುವುದೇ ಆಗಿದೆ. ಹಾಗೆ ಮಾಡಿದಾಗ ಮಾತ್ರ ಅವನು ಮೋಕ್ಷ ಸಾಧಿಸಲು ಸಾಧ್ಯ.

ಮನುಷ್ಯನು ತಾನು ನಿಂತಿರುವ ನೆಲದಿಂದ ಮೇಲೇರಲಾರ. ಮೇಲೆ ಹಾರಲು ಅವನಿಗೆ ರೆಕ್ಕೆಗಳೂ ಇಲ್ಲ. ಇಂತಹ ಈ ನೆಲದ ಬಂಧವನ್ನು ಹೊತ್ತಿಹ ಮನುಷ್ಯ ಸುಮ್ಮನಿರುವನೇ ಎಂದರೆ ಇಲ್ಲ.

ನೆಲದಿಂದ ಮೇಲೇಳದಿದ್ದರೂ, ಗಾಳಿಯಲ್ಲಿ ತೇಲಾಡದಿದ್ದರೂ, ಅವನು ತನ್ನ ಕತ್ತನ್ನು ಮೇಲೆ ಕೆಳಗೆ ಮಾಡಬಲ್ಲ. ಹೀಗೆ ಮಾಡುವಾಗ ಅವನು ಗಗನವನ್ನು (ಊರ್ಧ್ವವನ್ನು) ತಲೆಯೆತ್ತಿ ಕಣ್ಣು ಹಾಯಿಸಿದ ಕ್ಷಣವೇ ಅವನ ಕೈವಲ್ಯ ಪ್ರಾಪ್ತಿ ಎನ್ನುತ್ತಾರೆ ಡಿವಿಜಿ.

ನಾವು ಮಹತ್ತು ಮತ್ತು ಬೃಹತ್ತುಗಳನ್ನು ಸಾಧಿಸಲು ಹೊರಟಂದೇ ನಮಗೆ ಮೋಕ್ಷ ಖಚಿತ.

ಅಂದರೆ ನಾವು ಈ ಭೂಮಿಯಲ್ಲಿ ಹುಟ್ಟಿದ ಮೇಲೆ ಲೋಕವ್ಯವಹಾರದಲ್ಲಿ ನಿರತರಾಗಿದ್ದರೂ, ನಮ್ಮ ದೃಷ್ಟಿ ಮಾತ್ರ ಲೌಕಿಕವನ್ನು ಮೀರಿ ಆಗಮಿಕದೆಡೆಗೆ ಹಾಯಿಸಬೇಕು. ಸಂಸಾರದಲ್ಲಿಯೂ ಭಗವಂತನನ್ನು ಕಾಣಬೇಕು. ಯಾವುದೇ ಕೆಲಸವನ್ನು ಭಗವಂತನ ಕಾರ್ಯವೆಂದು ತಿಳಿದು ಬದುಕಿದಾಗ ವಿಷ್ಣುಪದ ನಿಶ್ಚಿತ ಎನ್ನುವುದು ಕಗ್ಗದ ಆಶಯ.

Address

Hosaholalu
Krishnarajapet
571426

Telephone

+919008820892

Website

Alerts

Be the first to know and let us send you an email when ಈ ಮನಸು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಈ ಮನಸು:

Shortcuts

Share

Category